CM Siddaramaiah meets AICC president Rahul Gandhi and discussed about Rajya Sabha seat selection. Siddaramaiah demand Rahul to consider only Kannadigas for the Rajya Sabha seat. <br /> <br />ಕರ್ನಾಟಕದಿಂದ ರಾಜ್ಯಸಭೆಗೆ ಕನ್ನಡೇತರ ಅಭ್ಯರ್ಥಿಯನ್ನು ಆಯ್ಕೆ ಮಾಡುವುದು ಬೇಡ ಎಂದು ಸಿದ್ದರಾಮಯ್ಯ ಅವರು ರಾಹುಲ್ ಗಾಂಧಿ ಅವರಿಗೆ ಮನವಿ ಮಾಡಿದ್ದಾರೆ. ನಿನ್ನೆ (ಮಾರ್ಚ್ 07)ರಂದು ದೆಹಲಿಗೆ ತೆರಳಿದ್ದ ಸಿದ್ದರಾಮಯ್ಯ ಅವರು 'ರಾಜ್ಯದಲ್ಲಿ ಚುನಾವಣೆ ಸಮೀಪದಲ್ಲಿದ್ದು, ಈ ಸಮಯದಲ್ಲಿ ಕನ್ನಡೇತರ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಕಳಿಸಿದರೆ ಹಲವರ ವಿರೋಧ ಕಟ್ಟಿಕೊಳ್ಳಬೇಕಾಗುತ್ತದೆ, ವಿರೋಧ ಪಕ್ಷದ ಟೀಕೆಗೆ ಆಹಾರವಾಗಬೇಕಾಗುತ್ತದೆ' ಎಂದು ಸಿದ್ದರಾಮಯ್ಯ ಅವರು ರಾಹುಲ್ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.